ರಾಂಚಿ: ಕಾಡಾನೆಯೊಂದು ರೈಲ್ವೆ ಹಳಿಗಳ ಮೇಲೆ ಮರಿಗೆ ಜನ್ಮ ನೀಡಿದ ಪರಿಣಾಮ ಜಾರ್ಖಂಡ್‌ನಲ್ಲಿ ಸುಮಾರು ಎರಡು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಳಿಸಿದ ಅಪರೂಪದ ಘಟನೆ ನಡೆದಿದೆ.nnnnn
ಕಾಡಾನೆಯೊಂದು ರೈಲ್ವೆ ಹಳಿಗಳ ಮೇಲೆ ಮರಿಗೆ ಜನ್ಮ ನೀಡಿ
iNdia Pak match
nnan
ಆನೆ ಮತ್ತು ಅದರ ಮರಿ ಸುರಕ್ಷಿತವಾಗಿವೆ. ಈ ಅಪರೂಪದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಈ ವೀಡಿಯೊವನ್ನು ಘಿ ನಲ್ಲಿ ಹಂಚಿಕೊAಡಿದ್ದು, ಇದು ಕರುಣೆಗೆ ಉದಾಹರಣೆ ಎಂದು ಬಣ್ಣಿಸಿದ್ದಾರೆ.

ಮಾನವ-ಪ್ರಾಣಿ ಸಂಘರ್ಷದ ಸುದ್ದಿಗಳ ಹೊರತಾಗಿ, ಮಾನವ-ಪ್ರಾಣಿಗಳ ಸಾಮರಸ್ಯದ ಅಸ್ತಿತ್ವದ ಈ ಉದಾಹರಣೆಯನ್ನು ಹಂಚಿಕೊಳ್ಳಲು ಸಂತೋಷವಾಗಿದೆ ಎಂದು ಯಾದವ್ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇಂತಹ ಹೃದಯಸ್ಪರ್ಶಿ ಫಲಿತಾಂಶಗಳನ್ನು ನೀಡುವ ಪ್ರಯತ್ನಗಳನ್ನು ನೋಡುವುದು ಸಂತೋಷಕರವಾಗಿದೆ. ಆನೆ ತನ್ನ ಮರಿಗೆ ಜನ್ಮ ನೀಡಲು ಸಹಾಯ ಮಾಡಿದ ಜಾರ್ಖಂಡ್ ಅರಣ್ಯ ಅಧಿಕಾರಿಗಳಿಗೆ ವಿಶೇಷ ಪ್ರಶಂಸೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಒoಇಈಅಅ), ರೈಲ್ವೆ ಸಚಿವಾಲಯದ ಸಮನ್ವಯದೊಂದಿಗೆ ಭಾರತದಾದ್ಯಂತ 3,500 ಕಿಮೀ ರೈಲ್ವೆ ಹಳಿಗಳನ್ನು ಸಮೀಕ್ಷೆ ಮಾಡಿದ ನಂತರ 110 ಕ್ಕೂ ಹೆಚ್ಚು ಸೂಕ್ಷ್ಮ ವನ್ಯಜೀವಿ ವಲಯಗಳನ್ನು ಗುರುತಿಸಿದೆ ಎಂದು ಯಾದವ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಈ ಉಪಕ್ರಮವು ಪ್ರಾಣಿಗಳಿಗೆ ಸಂಬAಧಿಸಿದ ಅಪಘಾತಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ಹಳಿಗಳು ಹೆಚ್ಚಾಗಿ ವನ್ಯಜೀವಿ ಕಾರಿಡಾರ್‌ಗಳೊಂದಿಗೆ ಛೇದಿಸುವ ಅರಣ್ಯ ಪ್ರದೇಶಗಳಲ್ಲಿವೆ.